ಭಕ್ತಿಯ ನಂಬಿಕೆಯಲ್ಲಿ ಭ್ರಮರಾಂಭಿಕೆಯ ಅಭಯ (ಅನುಭವ) "
ಶರೀರಕ್ಕೆ ಶಕ್ತಿಯಾಗಿ ದೇಹಕ್ಕೆ ಆತ್ಮವಾಗಿ ಪರಮಾತ್ಮ ಎನ್ನುವ ಶಕ್ತಿ ಈ ಜಗತ್ತನ್ನು ಯಾರಿಗೂ ಕಾಣದರೀತಿಯಲ್ಲಿ ಆಳುತಿರುವುದಂತು ನಿಜ. ಆದರೆ ಈ ಮನುಷ್ಯ ಅನ್ನುವ ಜೀವಿಯೂ ಈ ವೈಜ್ಞಾನಿಕತೆ ಅಧುನಿಕತೆಯ ಸೋಗಿನಲ್ಲಿ ಆ ಶಕ್ತಿಯನ್ಮು ಆರಾಧಿಸುವುದನ್ನು ಮರೆತಿದ್ದಾನೆ. ಹುಟ್ಟಿನಿಂದಲೂ ದೈವ ಭಕ್ತಿಯಿಲ್ಲದೆ ಕೆಲವರು ನಾಸ್ತಿಕರಾಗಿ ಬೆಳೆದರೆ ಕೆಲವರು ಈ ಸಮಾಜದಿಂದ, ತಮ್ಮ ಅತೀವವಾದ ಭಕ್ತಿಯಿಂದ ತಮ್ಮ ನಂಬಿಕೆ ಹುಸಿಯಾದಾಗ, ಕಷ್ಟಗಳನ್ನು ಎದುರಿಸಲು ದೈವ ಶಕ್ತಿ ಜೊತೆಯಾಗದಾಗ ದೈವ ಭಕ್ತಿ ಕಳೆದುಕೊಂಡು ನಾಸ್ತಿಕರಾಗಿ ಬದಲಾಗುವುದು ಉಂಟು. ನಂಬಿಕೆ ಮತ್ತು ಭಕ್ತಿಯ ವಿಚಾರವಾಗಿ ನನ್ನ ಸಹೊದ್ಯೋಗಿಗಳ ಜೊತೆ ಮಾತುಕತೆ ಆರಂಭವಾಗಿ ಅದು ಗಂಭೀರ ಚರ್ಚೆಯಾಗಿ ಮಾರ್ಪಾಡದಾಗ ನನ್ನ ಜೀವನದಲ್ಲಿ ನಡೆದ ಒಂದು ನೈಜ ಘಟನೆಯನ್ನು ವಿವರಿಸುವ ಅನಿವಾರ್ಯತೆ ನನಗೊದಗಿತು . ನನ್ನ ತಾಯಿಯು ಈ ವಿಚಾರವನ್ನು ಯಾರ ಹಂಚಿಕೊಳ್ಳಬಾರದಾಗಿ ನಿರ್ಬಂಧಿಸಿದ್ದರು ಆದರೂ ಅವರ ತಾಕೀತನ್ನು ಮೀರಿ ಆರು ತಿಂಗಳುಗಳಿಂದ ತುಟಿಮುಚ್ಚಿ ಒಡಲೊಳಗೆ ಬಚ್ಚಿಟ್ಟಿದ್ದ ಅನುಭವನ್ನು ಆಲ್ಲಿ ನುಡಿದಮೇಲೆ ಬರೆವಣಿಗೆಯಲ್ಲು ಹಂಚಿಕೊಳ್ಳೋಣ ಎಂದು ತೀರ್ಮಾಣಿಸಿದೆ.
ನಾನು ನನ್ನ ಬಾಲ್ಯದಿಂದಲೂ ದೈವ ದೇವರುಗಳ ಮೇಲೆ ಅತೀವವಾದ ಭಕ್ತಿಯನ್ನಿಟ್ಟುಕೊಂಡು ಬೆಳೆದವನು. ಮನೆಯಿರಲಿ ಊರಿನಲ್ಲಾಗಲಿ ಧಾರ್ಮಿಕ ಕಾರ್ಯಕ್ರಮವಿರಲಿ ನನ್ನ ಇರುವಿಕೆ ಇದ್ದೆ ಇರುತ್ತಿತ್ತು . ಆದರೆ ಅದೇಕೊ ಏನೋ ಕೆಲಸಕ್ಕೆ ಎಂದೂ ಸೇರಿಕೊಂಡೆನು ಅಂದಿನಿಂದ ನನ್ನ ಕೆಲಸದ ಒತ್ತಡ ತಲೆ ಎತ್ತಲೂ ಅನುವಿರದಾಗೆ ಬರುವ ಕಷ್ಟಗಳು ನನ್ನ ದೈವಭಕ್ತಿಗೂ ಕೊಡಲಿ ಏಟನ್ನು ಕೊಟ್ಟಿತ್ತು. ಆದ್ದರಿಂದ ದೇವಸ್ಥಾನ ಪೂಜೆ ಅನ್ನುವ ಪರಿಪಾಠಗಳು ನನ್ನ ಜೀವನದಲ್ಲಿ ಸ್ವಲ್ಪದರ ಮಟ್ಟಿಗೆ ನಿಂತುಹೋಗಿದ್ದವು. ಅದೆಲ್ಲದರ ಪರಿಣಾಮವಾಗಿ ಏನೊ ಹೊಸ ವಾಹಣ ತೆಗೆದುಕೊಂಡು ಮೂರೆ ತಿಂಗಳಿಗೆ ನಾನು ಎದುರಿಸಿದ್ದು ಸತತವಾಗಿ ನಾಲ್ಕು ಅಪಘಾತಗಳು. ನನ್ನ ಕನಸಿನ ನಾನು ತುಂಬಾ ಇಷ್ಟಪಟ್ಟು ಖರೀದಿಸಿದ ಆ ಬೈಕನ್ನು ಮಾರುವಷ್ಟರ ಮಟ್ಟಿಗೆ ನನ್ನ ಪರಿಸ್ಥಿತಿ ಹದಗೆಟ್ಟು ಹೋಯಿತು. ನಾನು ನನ್ನ ವಾಹನ ಮಾರಿದರು ನನ್ನ ಬೆನ್ನತ್ತಿದ ಆಘಾತಗಳು ನನ್ನ ಹಿಂದೆಯೆ ಇದ್ದವು. ಇದಕೆಲ್ಲ ಕಾರಣ ಏನಿರಬಹುದು ಎಂದು ಒಬ್ಬರ ಜೊತೆ ಕೇಳಿ ನೋಡಿದಾಗ ತಿಳಿದು ಬಂದದ್ದು ಹೀಗೆ ನನ್ನ ಸೋದರಮಾವ ಕಟೀಲು ಮಾತೆಯ ಉತ್ಕೃಷ್ಟವಾದ ಸೇವೆಯಾದ ಯಕ್ಷಗಾನವನ್ನು ನೆರವೇರಿಸುವುದಾಗಿ ಸಂಕಲ್ಪಮಾಡಿಕೊಂಡಿದ್ದರು .ಅದನ್ನು ನನ್ನ ಅಜ್ಜಿ ಅವರ ತಾಯಿ ಮತ್ತು ಸಹೋದರಿಯರ ಜೊತೆಯು ತಿಳಿಸಿದ್ದರು ಆದರೆ ದುರಾದೃಷ್ಟ ಏನೊ ಕೆಲಸದ ನಿಮಿತ್ತವಾಗಿ ಮುಂಬೈಯಲ್ಲಿದ್ದವರು ನಿಗೂಢವಾಗಿ ಸಾವನಪ್ಪಿದ್ದರು. ಆದ್ದರಿಂದ ಆ ಬಯಲಾಟದ ಸೇವೆಯೂ ಅವರ ನೆನೆಪಿನೊಂದಿಗೆ ಮರೆಯಾಗುತ್ತ ಹೋಗಿತ್ತು ಅದು ಇತ್ತೀಚಿಗೆ ನನ್ನ ಮುಖೇನವಾಗಿ ಮತ್ತೆ ಗೋಚರಿಸಿದ್ದು ಮನೆಯ ಹಿರಿಯರು ಜೊತೆಯಲ್ಲಿ ಮತ್ತೆ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥಿಸಿ ಯಕ್ಷಗಾನವನ್ನು ಆಡಿಸುವುದಾಗಿ ಬರೆಸಲಾಯಿತು.
ಇದಾದ ಸಲ್ಪ ದಿನದಲ್ಲಿ ನಾನೂ ಕೂಡಾ ನನ್ನ ವೃತ್ತಿ ಜೀವನವನ್ನು ಬದಲಾಯಿಸಿದೆ. ಜೊತೆಗೆ ಪರ್ಯಾಯ ಉದ್ಯೋಗವಾಗಿ ಸಾಕುಪ್ರಾಣಿಗಳ ಸರಬರಾಜುಗಳನ್ನು ಮಾಡುತಿದ್ದೆ. ಹಾಗೆ ಆರು ತಿಂಗಳ ಹಿಂದೆ ನಾನು ರಾತ್ರಿ ಬಜಪೆಗೆ ನನ್ನ ಗ್ರಾಹಕರೊಬ್ಬರಿಗೆ ನಾಯಿಮರಿಯನ್ನು ಕೊಟ್ಟು ಹಿದಿರುಗಿ ಬರುವಾಗ ಪೆರ್ಮುದೆ ಸಮೀಪ ಬರುವಷ್ಟರಲ್ಲಿ ಸಮಯ ಸುಮಾರು 11:45 ಆಗಿರಬಹುದು ಮನೆಯಿಂದ ಕರೆಬರಲಾರಂಬಿಸಿತು .ಕರೆ ಸ್ವೀಕರಿಸುದಕ್ಕಾಗಿ ಗಾಡಿಯನ್ನು ಬದಿಗೆ ನಿಲ್ಲಿಸಿ ಕರೆಯನ್ನು ಸ್ವೀಕರಿಸಿ ಇನ್ನೇನು ಜೇಬಿನೊಳಗೆ ಮೊಬೈಲ್ ಇಡಬೇಕು ಎನ್ನುವಷ್ಟರಲ್ಲಿ ನನಗೊಂದು ವಿಚಿತ್ರ ಎದುರಾಗಿತ್ತು. 90 ರ ಅಸುಪಾಸಿನ ಹಣ್ಣು ಮುದುಕಿ ಹಣೆಯಲ್ಲಿ ದೊಡ್ಡ ಕುಂಕುಮದ ಬೊಟ್ಟು ತಲೆಯಲ್ಲಿ ಮಲ್ಲಿಗೆ ಹೂವು ಕೈಯಲ್ಲಿ ತನಗಿಂತ ಉದ್ದವಾದ ದಪ್ಪನೆಯ ಊರುಗೋಲು ಕೆಂಪು ಸೀರೆ ತೊಟ್ಟು ನನಗಿಂತ ಹತ್ತೇ ಹೆಜ್ಜೆ ದೂರದಲ್ಲಿದ್ದಳು. ನನ್ನ ಜೀವನದಲ್ಲಿ ಯಾವತ್ತು ಭೂತ,ಪ್ರೇತ ಕಂಡವನಲ್ಲ ನೋಡಬೇಕು ಅನ್ನುವ ಆಸೆಯಂತು ಇತ್ತು ಒಂದೆಡ ಕೈಕಾಲು ನಡುಗಲು ಆರಂಭವಾಯಿತು ಹೆದರಿಕೆಯಲ್ಲಿ ಬೆವರು ಬರಲಾಂಭಿಸಿತು. ನನ್ನೆಡೆಗೆ ನೋಟವಿತ್ತು ನಿಧಾನವಾಗಿ ಬರುವುದನ್ನು ಕಂಡಾಗ ಒಮ್ಮೆ ಒಡಿ ಬಿಡೋಣ ಅನ್ನಿಸಿದರು ದೈರ್ಯ ಮಾಡಿ ಆಗಿದ್ದಾಗಲಿ ಎಂದು ಜೀವ ಕೈಯಲ್ಲಿ ಹಿಡಿದು ಅಲ್ಲೆ ನಿಂತೆ. ಹತ್ತಿರ ಬಂದವಳೆ ಒಂದು ನಗೆಯನ್ನು ಬೀರಿದಳು ಆ ನಗೆಯೆ ವಿಚಿತ್ರವಾಗಿತ್ತುನನ್ನಲ್ಲಿ ಇನ್ನಷ್ಟು ಭಯ ಹೆಚ್ಚಾಯಿತು.
ನಗೆಯಯನ್ನು ಬೀರಿದವಳೆ ಮಾತಿಗೆ ಆರಂಭಿಸಿದಳು .. ಮಗಾ.. ಸುಂಕದಕಟ್ಟೆಯಲ್ಲಿ ಆಟ ಉಂಟಾ ಮಗಾ.. ಅನ್ನುವಾ.. ಧ್ವನಿಯೇ ಅಧ್ಬುತವಾಗಿತ್ತು . ನನಗೆ ಭಯದಲ್ಲಿ ಮಾತೆ ಹೊರಡಲಿಲ್ಲ . ತೊದಲುತ್ತಾ ಗೊತ್ತಿಲ್ಲ ಅಂದೆ.. ಮತ್ತೆ ನಕ್ಕಳು ಆ ತಾಯಿ ತುಳುವಿನಲ್ಲಿ ಮಾತು ಆರಂಭಿಸಿದಳು... ಬಾಲೆ ಗಾಡಿ ಪೊಸತ.. ಎನನ್ ಆಟದಡೆ ಲೆತೊಂದು ಪೋಪನಾ ( ಗಾಡಿ ಹೊಸತಾ ನನ್ನನ್ನು ಯಕ್ಷಗಾನದಲ್ಲಿಗೆ ಕರೆದುಕೊಂಡು ಹೋಗುತ್ತಿಯಾ) ಮತ್ತೆ ನಗು ಭಯದಲ್ಲಿ ದೇಹವಿಡಿ ನಡುಗಲು ಪ್ರಾರಂಭವಾಗಿತ್ತು ನುಡಿಗಳೇ.. ಹೊರಡಲಿಲ್ಲ ಸ್ತಬ್ದವಾಗಿ ಬಿಟ್ಟಿದ್ದೆ ನಾನು..ಮತ್ತೆ ಅವಳಿಂದಲೇ..ಮಾತು ಮಗಾ ಬೊರ್ಚಿ ಯಾನ್ ನಡತ್ತೊಂದು ಪೋಪೆ ... ಮಗಾ ನಿನ್ನಡಾ ಇತ್ತುಂಡಾ ಕಾಸ್ ಕೊರ್ಲ ಮಗಾ ಎಂದಳು .. ನಾನು ಏತು ಎನ್ನುವಷ್ಟರಲ್ಲಿ ನಿನಡ ಇತ್ತಿನಾತ್ ಕೊರ್ಲ ಎಂದಳು ನನ್ನ ಅಂಗಿಯ ಕಿಸೆಯಲ್ಲಿದ್ದ ಹಣವನ್ನು ಎಣಿಸದೆ ನಡುಗುವ ಕೈಯಲ್ಲಿ ಅವಳ ಕೈಗಿತ್ತೆ. ಆ ಕ್ಷಣವೇ ಅದ್ಬುತ ವಾಗಿತ್ತು ಹಣದೊಂದಿಗೆ ನನ್ನ ತಲೆ ಸವರಿ ಮುಖವನ್ನು ಮುದ್ದಾಡಿ ತನ್ನ ಕೈಗಳನ್ನು ತುಟಿಗಳಿಗೆ ಒತ್ತಿಕೊಂಡಳು ಆ ತಾಯಿ ಆ ಸ್ಪರ್ಶ ನನ್ನ ಜೀವದಲ್ಲಿ ಹೊಸ ಸಂಚಲವನ್ನೆ ಮೂಡಿಸಿತ್ತು ನನ್ನ ರೊಮಗಳು ಎದ್ದು ನಿಂತಿದ್ದವು. ಭಯ,ಆತಂಕ,ಒಂದೆಡೆ ಅಧ್ಬುತ ಅನುಭವ ಜೊತೆಯಾಗಿದ್ದವು ಕಣ್ಣಲ್ಲಿ ನೀರು ಬರಲಾರಂಭಿಸಿತು. ಆ ತಾಯಿಯ ಮುಖದಲ್ಲಿ ನಗು ಮತ್ತೆ ನನ್ನಲ್ಲಿ ಕೇಳಿದಳು ಯಾನ್ ಎರ್ಂದ್ ಗೊತ್ತಾಂಡ (ನಾನು ಯಾರೆಂದು ಗೊತ್ತಾಯ್ತ) ಇಲ್ಲ ಅಂದೆ ಅದಕ್ಕೆ ಅವಳೆಂದಳು ಮಗಾ .. ಈ ಉಂತುದಿನಾ ಜಾಗ ಉಂಡತಾ ಉಂದು ಎನ್ನ ಕಾರ್ಣಿಕದ ಜಾಗೆ .. ಯಾನ್ ಅಪ್ಪೆ ಭ್ರಮರಾಂಭಿಕೆ ಎಕ್ಕಾರ್ಡ್ ಆಟ ಉಂಡತಾ ಅಲ್ತುರ್ದ್ ಸುಂಕದ ಕಟ್ಟೆ ಆಟದಡೆ ಪೋಪಿನಿ( ನೀನು ನಿಂತ ಸ್ಥಳ ಇದೆಯಲ್ಲಾ ಇದು ನನ್ನ ಕಾರಣಿಕದ ಸ್ಥಳ ನಾನು ಎಕ್ಕಾರಿನಲ್ಲಿ ನಡೆಯುತಿರುವ ಯಕ್ಷಗಾನದಲ್ಲಿಗೆ ಸವಾರಿ ಹೋಗುತಿದ್ದೇನೆ.. ) ನನ್ನೆದೆ ನಿಂತು ಹೋಯಿತೆನು ಎಂಬತೆ ಭಾಸವಾಯಿತು ಮತ್ತೆ ಈ ಪೋಡ್ಯೊರ್ಚಿ ಆಟ... ಉಂಡತ್ತಾ ಮತ್ತೆ ನಗು ಬೀರಿ ಗಾಡಿಯನ್ನೊಮ್ಮೆ ಮುಟ್ಟಿ ಮುಂದೆ ಹೆಜ್ಜೆ ಹಾಕಿದಳು ಆ ನಾನು ಬೆವತು ಹೋಗಿದ್ದೆ ಭಯದಿಂದ ಹಿಂತಿರುಗಿ ನೋಡೊದಕ್ಕು ಭಯದಿಂದ ಒಂದೆರಡು ನಿಮಿಷ ಬಿಟ್ಟು ಹಿಂತಿರುಗಿ ನೋಡಿದೆ ಆ ತಾಯಿ ಅಲ್ಲಿ ಕಾಣಲೆ ಇಲ್ಲ.
ಗಾಡಿ ಸ್ಟ್ರಾಟ್ ಮಾಡಿ ಒಂದೇ ವೇಗದಲ್ಲಿ ಹೊರಟವನು 10 ನಿಮಿಷದಲ್ಲಿ ಮನೆಯಲ್ಲಿದ್ದೆ ಗಾಬರಿ,ಭಯದಿಂದ ಮನೆಯಲ್ಲಿದ್ದ ನನ್ನನ್ನು ಏನಾಯಿತು ಎಂದು ಕೇಳಿದ ಅಮ್ಮನಿಗೆ ವಿವರಿಸಿದೆ ಆಗಲೇ ಅಮ್ಮ ಇದನ್ನುಅಮ್ಮ ಯಾರಲ್ಲೂ ಹೇಳಬೇಡ ಅಂದಿದ್ದಳು..ನಿಜವಾಗಿಯೋ ನನಗೆ ಸಿಕ್ಕಿದ್ದು ಆ ಭ್ರಮರಾಂಭಿಕೆಯೇ ಅಥವಾ ಮಾನವ ತಾಯಿಯೇ ಅನ್ನೊದು ಗೊತ್ತಿಲ್ಲ ಆ ಸಮಯ ಮತ್ತು ಆ ಸನ್ನಿವೇಶ ನನ್ನಲ್ಲಿ ಆ ತಾಯಿಯ ದರ್ಶವಾದಂತೆ ಇತ್ತು ಆ ಅನುಭವವೇ ಆಗಿತ್ತು. ನನ್ನಲ್ಲಿ ನಾನು ನಡೆಸಬೇಕಾದ ಯಕ್ಷಗಾನವನ್ನು ನೆನೆಪಿಸಿದಂತಿತ್ತು. ನನ್ನಲ್ಲಿ ಭಕ್ತಿಯ ಭಾವವನ್ನು ಬಲಗೊಳಿಸಿದಂತಿತ್ತು, ನನ್ನ ನಂಬಿಕೆಯಲ್ಲಿ ಆ ತಾಯಿಯನ್ನು ಕಂಡಷ್ಟೆ ಸಂತೋಷ ಅನುಭವ ಆ ಕ್ಷಣ ದೊರಕಿಸಿಕೊಟ್ಟಿತ್ತು ಈ ಕಲಿಯುಗದಲ್ಲಿಯು ದೇವರ ಕಾರಣಿಕ ಇದೆ ಎನ್ನುದಕ್ಕೆ ನನ್ನ ಆತ್ಮಕ್ಕೆ ಸಾಕ್ಷಿಯಾಗಿತ್ತು. ಇದು ನನಗೆ ಆದ ಅನುಭವ ಎಲ್ಲರೂ ಇದನ್ನು ನಂಬಲೇ ಬೇಕು ಅಂತ ಏನೂ ಇಲ್ಲ ನನ್ನ ತಾಯಿಯಲ್ಲಿ ಮತ್ತು ಆ ಕಟೀಲೇಶ್ವರಿಯ ಪಾದತಲಕ್ಕೆ ತಲೆಭಾಗಿ ಕ್ಷಮೆಯಾಚಿಸುತ್ತಾ..ಅವಳ ಸೇವೆಯನ್ನು ಮಾಡುವ ಅನುಗ್ರಹವನ್ನು ಅವಳು ಕರುಣಿಸಲಿ ಎಂದು ಬೇಡುತಿದ್ದೇನೆ.
No comments:
Post a Comment