tulu is the official language and more than lakhs of people's mother toungh

Breaking

Monday, 16 September 2019

ಎಂಟನೇ ಪರಿಛೇದದಲ್ಲಿ ತುಳು ಭಾಷೆ -tulu in 8th shedule

ರಾವಳಿ ಮಾತೃಭಾಷೆ ಮತ್ತು ವ್ಯಾವಹಾರಿಕ ಭಾಷೆಯಾಗಿರುವ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆನ್ನುವ ಆಗ್ರಹ ಹಿಂದಿನಿಂದಲೂ ಇದ್ದು, ಈಗ ಆ ಬೇಡಿಕೆಯ ಧ್ವನಿ ಜೋರಾಗಿದೆ. ಈಗಾಗಲೇ 22 ಭಾಷೆಗಳು ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದು ತುಳುವನ್ನೂ ಸೇರಿಸಬೇಕೆನ್ನುವ ಆಶೋತ್ತರ ಜನರದ್ದು. ಹಾಗಾದರೆ 8ನೇ ಪರಿಚ್ಛೇದ ಎಂದರೇನು? 



ಸಂವಿಧಾನದ 344 (1) ನೇ ವಿಧಿಯು ದೇಶದ ಅಧಿಕೃತ ಭಾಷೆ ಕುರಿತು ಹೇಳುತ್ತದೆ. ಇದರನ್ವಯ ಈ ಭಾಷೆಗಳು ಆಡಳಿತಾತ್ಮಕವಾಗಿ ಮತ್ತು ವ್ಯಾವಹಾರಿಕವಾಗಿ ಗುರುತಿಸಿಕೊಂಡಿರಬೇಕು. ಹಿಂದಿ ಭಾಷೇತರ ರಾಜ್ಯಗಳು ಆ ಪ್ರಾದೇಶಿಕ ಭಾಷೆಯೊಂದಿಗೆ ಆಡಳಿತ ನಡೆಸಬೇಕೆಂಬುದು ಇದರ ಆಶಯ.

780 ಭಾಷೆಗಳು 
ಜನಗಣತಿಯ ಪ್ರಕಾರ ದೇಶದಲ್ಲಿ ಸುಮಾರು 780 ಭಾಷೆಗಳು ಇವೆ.

ಅವುಗಳಲ್ಲಿ ಸುಮಾರು 400 ಭಾಷೆಗಳು ಅಳಿವಿನಂಚಿನಲ್ಲಿದ್ದು, ಮುಂದಿನ 50 ವರ್ಷಗಳಲ್ಲಿ ಇಲ್ಲವಾಗುವ ಸಾಧ್ಯತೆ ಇದೆ. ಭಾರತದಲ್ಲಿ ಸುಮಾರು 234 ಮಾತೃಭಾಷೆಗಳಿವೆ. ಜಗತ್ತಿನಲ್ಲಿ ಸುಮಾರು 7,105 ಭಾಷೆಗಳು ಇವೆ ಎಂದು ಹೇಳಲಾಗುತ್ತಿದೆ.

44 ಭಾಷೆಗಳು ಸೇರ್ಪಡೆಗೆ ಇಂಗಿತ

8ನೇ ಪರಿಚ್ಛೇದದಲ್ಲಿ 22 ಭಾಷೆಗಳು ಸ್ಥಾನ ಪಡೆದರೆ ಅದಕ್ಕಿಂತ 2 ಪಟ್ಟು ಭಾಷೆಗಳು ಹೊರಗೆ ಇವೆ. ಇವುಗಳ ಪೈಕಿ ಕೆಲವು ಭಾಷೆಗಳು 8ನೇ ಪರಿಚ್ಛೇದ ಸೇರುವ ಇಂಗಿತದಲ್ಲಿವೆ.

ಯಾವೆಲ್ಲ ಭಾಷೆಗಳು?
ಕನ್ನಡ, ಹಿಂದಿ, ಒಡಿಯಾ, ಅಸ್ಸಾಮಿ, ಬಂಗಾಲಿ, ಬೋಡೋ, ಡೋಂಗ್ರಿ, ಗುಜರಾತಿ, ಕಾಶ್ಮೀರ, ಕೊಂಕಣಿ, ಮರಾಠಿ, ಮೈಥಿಲಿ, ಮೈಟೀ, ಮಲಯಾಳ, ಮಣಿಪುರಿ, ಪಂಜಾಬಿ, ತಮಿಳು, ಉರ್ದು, ಸಿಂಧಿ, ಸಂಸ್ಕೃತ, ನೇಪಾಲಿ ಮತ್ತು ಸಂತಾಳಿ.

ಅಧಿಕೃತ ಭಾಷೆ ಎಂದರೇನು? ಮಾನದಂಡವೇನು?

ಅಧಿಕೃತ ಭಾಷೆಗಳು ಎಂದರೆ ಸರಕಾರದ ಅಥವಾ ನಿತ್ಯದ ವ್ಯವಹಾರದ ಸಲುವಾಗಿ ಗುರುತಿಸಿಕೊಂಡಿರಬೇಕು. ಮಾತ್ರವಲ್ಲದೆ ಕಾನೂನಾತ್ಮಕ ವ್ಯವಹಾರಗಳಲ್ಲೂ ಈ ಭಾಷೆಯನ್ನು ಬಳಸುವಂತಿರಬೇಕು. ಇದಕ್ಕೆ ಸಂವಿಧಾನದ ಮಾನ್ಯತೆ ದೊರೆತರೆ ಅದು ಅಧಿಕೃತ ಭಾಷೆಯಾಗುತ್ತದೆ. ಉದಾ: ರಾಜ್ಯದಲ್ಲಿ ಕನ್ನಡ ಅಧಿಕೃತ ಭಾಷೆಯಾಗಿದೆ. ಈ ಎಲ್ಲ ಗುಣಗಳು ಇದ್ದರೆ ಮಾತ್ರ ಭಾಷೆಯೊಂದಕ್ಕೆ ಮಾನ್ಯತೆ ದೊರೆಯಬಹುದು.

8ನೇ ಪರಿಚ್ಛೇದಕ್ಕೆ ಸೇರ್ಪಡೆ ಹೇಗೆ? 

8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕಾದರೆ ಒಂದು ನಿರ್ದಿಷ್ಟ ಭಾಷೆ ಮಾತನಾಡುವ ಜನರೆಷ್ಟು? ಎಷ್ಟು ಪ್ರದೇಶದಲ್ಲಿ ವ್ಯಾಪಿಸಿದೆ, ಅದರ ಪ್ರಭಾವ ಮತ್ತು ಬಳಸಬಹುದಾದ ವ್ಯಾಪ್ತಿ, ಆಡಳಿತಾತ್ಮಕ, ವ್ಯಾವಹಾರಿಕ ತಾಂತ್ರಿಕ ಸಂಗತಿಗಳನ್ನು ಗಮನದಲ್ಲಿರಿಸಿ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ. ಅನಂತರ ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾಗುತ್ತದೆ. ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಎರಡೂ ಮನೆಗಳು ಅಂಗೀಕರಿಸಿ, ರಾಷ್ಟ್ರಪತಿಯವರ ಸಹಿ ಪಡೆಯಬೇಕಾಗುತ್ತದೆ

No comments:

Post a Comment